Breaking
23 Dec 2024, Mon

ಬಸ್ ಚಾಲಕನ ಧಾವಂತಕ್ಕೆ ಸ್ನೇಹಿತರಿಬ್ಬರು ಬಲಿ: ಎರಡು ಅಪಘಾತ, ಊರಿನಲ್ಲಿ ಸೂತಕದ ಛಾಯೆ

ಬಂಟ್ವಾಳ: ತುಂಬೆಯ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಮತ್ತೋರ್ವ ಯುವಕ ಮೃತಪಟ್ಟಿದ್ದಾರೆ. ಈ ಮೂಲಕ ಸ್ನೇಹಿತರಿಬ್ಬರೂ ಜೊತೆಯಾಗಿಯೇ ಜೀವ ಕಳಕೊಳ್ಳುವಂತಾಗಿದೆ.

ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಮುಂದಿನಿಂದ ಸಾಗುತ್ತಿದ್ದ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿತ್ತು. ರೊಟ್ಟಿಗುಡ್ಡೆ ನಿವಾಸಿ ಪ್ರವೀಣ್(34) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರ ಗಾಯಗೊಂಡಿದ್ದ ಸಂದೀಪ್ (35) ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಬ್ಬರು ಕೂಡ ಸೇಲ್ಸ್ ಮ್ಯಾನ್ ವೃತ್ತಿಯಲ್ಲಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ.ಎರಡು ದಿನಗಳ ಬಳಿಕ ಸಂದೀಪ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬಸ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಆಗಿತ್ತೆಂದು ದೂರು ಕೇಳಿಬಂದಿದೆ.ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ. 31 ರಂದು ಕಲ್ಲಾಪು ಸಮೀಪದ ಅಡಂಕುದ್ರು ನಲ್ಲಿ ನಡೆದ ಅಪಘಾತದಲ್ಲಿ ಆದೇ ಊರಿನ ಆದಂ (64) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರು.ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಕೆಎಸ್ ಆರ್ ಟಿಸಿ ನಗರ ಸಾರಿಗೆ ಬಸ್ಸಿನಿಂದ ಕೆಳಗಿಳಿದು, ಖಾಸಗಿ ಬಸ್ಸು ಹತ್ತುತ್ತಿದ್ದ ವೇಳೆ ಅವರ ಮೇಲೆ ಇಂಟರ್ ಲಾಕ್ ತುಂಬಿದ್ದ ಟೆಂಪೋ ಲಾರಿಯೊಂದು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು.ಒಂದೇ ಊರಿನ ಮೂವರ ಸಾವು ಗ್ರಾಮದಲ್ಲಿ ಅಕ್ಷರಶಃ ಸೂತಕದ ಛಾಯೆ ಮನೆ ಮಾಡಿದೆ. ಹಠಾತ್‌ ಆಗಿ ನಡೆದ ದುರಂತದಿಂದಾಗಿ ಊರಿನಲ್ಲಿ ನೀರವ ಮೌನ ಆವರಿಸಿದೆ

Leave a Reply

Your email address will not be published. Required fields are marked *