Breaking
22 Mar 2026, Sun

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್ಕರ್ ಅವರಿಗೆ “ಹುಟ್ಟೂರ ಸನ್ಮಾನ”

ಬಂಟ್ವಾಳ: ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್ಕರ್ ಅವರಿಗೆ ಅಭಿನಂದನಾ ಸಮಿತಿ ವತಿಯಿಂದ ಡಿ. 07ರಂದು ಸ್ವರ್ಣಸಭಾ ಸಭಾಂಗಣ ರಾಜಸೌಧ ಬಂಟ್ವಾಳದಲ್ಲಿ ಸನ್ಮಾನ ಕಾಯ೯ಕ್ರಮ ನಡೆಯಲಿದೆ.

ಅರ್ಜುನ್ ಭಂಡಾರ್ಕರ್‌ ಅವರು ಕಳೆದ 6 ವರ್ಷಗಳಿಂದ ಸುಮಾರು 9ಕೋಟಿ ರೂ. ಮೊತ್ತವನ್ನು ದಾನಿಗಳ ಸಹಕಾರದಿಂದ ಪಡೆದು 1700ಕ್ಕೂ ಅಧಿಕ ಕುಟುಂಬಗಳಿಗೆ ನೆರವು ನೀಡಿದ್ದರು. ಈ ಹಿನ್ನಲೆ ಹಲವು ಸೇವಾಸಂಸ್ಥೆಗಳ ಸಹಭಾಗಿತ್ವದಲ್ಲಿ ಸನ್ಮಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *