Breaking
22 Mar 2026, Sun

ರಿಕ್ಷಾದ ಮೇಲೆ ಬಿದ್ದ ಮರ: ನಾಲ್ವರಿಗೆ ಗಾಯ

ಕಾರ್ಕಳ: ರಿಕ್ಷಾದ ಮೇಲೆ ಮರವೊಂದು ಬಿದ್ದು ರಿಕ್ಷಾ ಚಾಲಕ ಸಹಿತ ನಾಲ್ವರು ಗಾಯಗೊಂಡಿರುವ ಘಟನೆ ಡಿ. 3 ರಂದು ಕಾರ್ಕಳದಲ್ಲಿ ನಡೆದಿದೆ.

ಆಟೋ ಚಾಲಕ ತನ್ನ ಕುಟುಂಬದ ನಾಲ್ವರನ್ನು ಕರೆದುಕೊಂಡು ಕಾರ್ಕಳ ತಾಲೂಕಿನ ತೆಳ್ಳಾರು ಕಡೆಗೆ ತೆರಳುತ್ತಿದ್ದ ವೇಳೆ ರಾಘವೇಂದ್ರ ಮಠಕ್ಕೆ ಸೇರಿದ ಮರವೊಂದು ರಿಕ್ಷಾದ ಮೇಲೆ ಬಿದ್ದಿದೆ.

ಅದೃಷ್ಟವಶಾತ್ ರಿಕ್ಷಾದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *