Breaking
22 Mar 2026, Sun

ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ: ಮೂವರಿಗೆ ಗಾಯ

ಕಾರ್ಕಳ : ಸೈಕಲ್ ಸವಾರ ಅಡ್ಡಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯ ಮುರೂರು ಬಳಿ ನಡೆದಿದೆ.

ಗಾಯಗೊಂಡವರನ್ನು ಹಿರ್ಗಾನ ಗ್ರಾಮದ ಮೂರೂರು ಬಳಿ ನಿವಾಸಿ ಕಾರ್ಕಳದ ಪಂಚಾಯತ್ ರಾಜ್ ವಿಭಾಗದ ಇಂಜಿನಿಯರ್ ಸದಾನಂದ ನಾಯ್ಕ್ ಹಾಗೂ ಪತ್ನಿ ಮಗು ಎಂದು ತಿಳಿದುಬಂದಿದೆ.

ಕುಟುಂಬದವರು ಕಾರ್ಕಳದಿಂದ ಹೆಬ್ರಿ ಕಡೆಯ ಬ್ರಹ್ಮಾವರದ ಚಾಂತಾರಿಗೆ ಹೊರಟಿದ್ದ ವೇಳೆ ಸೈಕಲ್ ಸವಾರ ಅಡ್ಡಬಂದು ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *