Breaking
21 Mar 2026, Sat

ಮೂಡುಶೆಡ್ಡೆ ಗ್ರಾ. ಪಂ. ಕಚೇರಿ ಎದುರು ತಾಯಿ -ಮಗಳ ಜಗಳ: ಕಾವೂರು ಠಾಣೆಯಲ್ಲಿ ದೂರು ದಾಖಲು

ಮಂಗಳೂರು: ಮೂಡುಶೆಡ್ಡೆ ಗ್ರಾಮ ಪಂಚಾಯತ್ ಕಚೇರಿಯ ಎದುರು ಮಗಳೇ ತನ್ನ ತಾಯಿಗೆ ಮನಬಂದಂತೆ ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಹಿಳಾ ರಕ್ಷಣಾ ವೇದಿಕೆ ಮಗಳು ನೇತ್ರಾವತಿ ವಿರುದ್ಧ ದೂರು ದಾಖಲಿಸಿದೆ.

ಮಗಳು ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಘಟನೆಯ ಬಗ್ಗೆ ಎಚ್ಚೆತ್ತ ಮಹಿಳಾ ರಕ್ಷಣಾ ವೇದಿಕೆ ಹಲ್ಲೆಗೆ ಒಳಗಾದ ನಿರ್ಮಲಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಸಂದರ್ಭ ಸಮಾಜ ಸೇವಕಿ ರಮಿತಾ ಸೂರ್ಯವಂಶಿ ಹಾಗೂ ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದೀಕ್ಷಿತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *