Breaking
22 Sep 2026, Tue

ಕಣಂಜಾರ್ ಕಲೋತ್ಸವ 2025 ಕಾರ್ಯಕ್ರಮ: ಸಂಗೀತ ಕ್ಷೇತ್ರದ ಯುವ ಸಾಧಕಿ ಕುಮಾರಿ ಸನ್ನಿಧಿ ಶೆಟ್ಟಿಗೆ ಸನ್ಮಾನ

ಮುಂಬಯಿ: ಫ್ರೆಂಡ್ಸ್ ಸರ್ಕಲ್ ಕಣಂಜಾರ್ ಮುಂಬಯಿ ಇವರ ಸಾರಥ್ಯದಲ್ಲಿ ‘ಕಣಂಜಾರ್ ಕಲೋತ್ಸವ 2025’ ಕಾರ್ಯಕ್ರಮ ನ. 29ರಂದು ನಡೆಯಿತು.

ಈ ಸಂದರ್ಭದಲ್ಲಿ ಯುವ ಕಲಾ ಪ್ರತಿಭೆ, ಸಂಗೀತ ಕ್ಷೇತ್ರದ ಯುವ ಸಾಧಕಿ ಕುಮಾರಿ ಸನ್ನಿಧಿ ಶೆಟ್ಟಿ ಅವರಿಗೆ ಗೌರವಪೂರ್ವಕ ಸನ್ಮಾನ ನೀಡಿ ಅಭಿನಂದಿಸಲಾಯಿತು.

ಈ ವೇಳೆ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಧರ ಕೆ. ಶೆಟ್ಟಿ ಇನ್ನಂಜೆ ವಹಿಸಿದ್ದರು. ಫ್ರೆಂಡ್ಸ್ ಸರ್ಕಲ್ ಕಣಂಜಾರ್ ಸಂಸ್ಥೆಯ ಪ್ರಮುಖರಾದ ಪ್ರವೀಣ್ ಶೆಟ್ಟಿಯವರ ನೇತೃತ್ವದಲ್ಲಿ ಕಲೋತ್ಸವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಅತಿಥಿ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯ ಕಲಾಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *