ಮಂಗಳೂರು : ನಗರದ ಹೊರವಲಯದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ಮಗಳು ತಾಯಿಗೆ ಹಲ್ಲೆ ಮಾಡಿರುವಂತಹ ವೀಡಿಯೋ ಒಂದು ವೈರಲ್ ಆಗಿದ್ದು, ಸಾವ೯ಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮೂಡುಶೆಡ್ಡೆ ಶಿವನಗರದ ನಿವಾಸಿಗಳಾದ ತಾಯಿ–ಮಗಳು ಪದೇ ಪದೇ ಜಗಳ ಆಡುತ್ತಿದ್ದರು. ಈ ಬಗ್ಗೆ ತಾಯಿ ಹಲವು ಬಾರಿ ಪಂಚಾಯತ್‌ಗೆ ದೂರು ನೀಡಿದ್ದರು ಎನ್ನಲಾಗಿದೆ.

ಮೂರು ದಿನಗಳ ಹಿಂದೆ ಮತ್ತೆ ಜಗಳವಾಗುತ್ತಿದ್ದ ವೇಳೆ ಕೋಪಗೊಂಡ ಮಗಳು ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಚಪ್ಪಲಿಯಿಂದ ಹೊಡೆದಿದ್ದಾಳೆ ಎಂದು ತಿಳಿದು ಬಂದಿದೆ.
ತಾಯಿ-ಮಗಳ ಜಗಳಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿಡಿಯೋವನ್ನು ರೆಕಾರ್ಡ್ ಮಾಡಿ, ಹೆಚ್ಚು ವೀವ್ಸ್ ಗಳಿಸುವ ಉದ್ದೇಶದಿಂದ ವಿಡಿಯೋವನ್ನು ಶೇರ್ ಮಾಡಿದವರ ವಿರುದ್ಧ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.





