Breaking
5 Aug 2026, Wed

ಮನೆಯ ಬಳಿ ಆಹಾರ ಅರಸಿ ಬಂದ ಚಿರತೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಕಾರ್ಕಳ: ಹೆಬ್ರಿ-ಕಾರ್ಕಳ ಗಡಿಯ ಪಡುಕುಡೂರು ಪ್ರದೇಶದ ವ್ಯಕ್ತಿಯೋವ೯ರ ಮನೆಯ ಬಳಿ ಆಹಾರ ಅರಸಿಕೊಂಡು ಬಂದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಮನೆಗೆ ಹೊಂದಿಕೊಂಡಿದ್ದ ಹೊರ ಭಾಗದ ಕೊಠಡಿಯ ಸಮೀಪದಲ್ಲಿ ಆಹಾರಕ್ಕಾಗಿ ಚಿರತೆ ಹೊಂಚು ಹಾಕಿ ಕುಳಿತಿತ್ತು. ಶಬ್ಧ ಗಮನಿಸಿ, ದೂರದಿಂದ ಚಿರತೆ ಇರುವುದನ್ನು ತಿಳಿದ ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ಬೋನನ್ನು ಇಟ್ಟು ಕಾರ್ಯಾಚರಣೆ ಆರಂಭಿಸಿದ್ದು, ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ನಂತರ, ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *