Breaking
22 Mar 2026, Sun

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಶಝ ಫಾತಿಮಾ

ಬಂಟ್ವಾಳ: ತಾಲೂಕಿನ ಎಸ್ ವಿ ಎಸ್ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನದ ಶಝ ಫಾತಿಮಾ ಅವರು ಪ್ರಥಮ ಸ್ಥಾನ ಪಡೆದು ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹಿಂದಿ ಭಾಷಣ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿದ ಫಾತಿಮಾ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರಿಗೆ ಮುಖ್ಯಗುರುಗಳಾದ ಗೋಪಾಲಕೃಷ್ಣ ನೇರಳಕಟ್ಟೆ ಮತ್ತು ಭಾರತಿ ಕೈರಂಗಳ ತರಬೇತಿಯನ್ನು ನೀಡಿದ್ದು , ಶಿಕ್ಷಕರಾದ ಅಬ್ದುಲ್ ರಫೀಕ್ , ಶರತ್ ಕುಮಾರ್ , ಕ್ಷಮಾ ಕುಮಾರಿ, ಶುಭ , ಪವಿತ್ರ ಮತ್ತು ಅನಿಲ್ ರವರು ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *