ಉಡುಪಿ: ಜಿಲ್ಲೆಯ ಉದ್ಯಾವರದಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ನಡೆದಿದೆ.
ಫುಡ್ ಡೆಲಿವರಿ ಮಾಡಿ ಹಿಂತಿರುಗುತ್ತಿದ್ದ ವೇಳೆ, ಬೀದಿ ನಾಯಿಗಳ ದಂಡು ಯುವಕನನ್ನು ಹಿಂಬಾಲಿಸಿ, ಬೈಕ್ ನಿಧಾನಗೊಳಿಸಿದ ಕ್ಷಣದಲ್ಲಿ 3–4 ನಾಯಿಗಳು ಕಾಲಿಗೆ ಕಚ್ಚಿವೆ.

ನಿಯಂತ್ರಣ ಕಳೆದುಕೊಂಡ ಯುವಕ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಯುವಕನ ಮೇಲೆ ಮತ್ತೆ ದಾಳಿ ಮಾಡಲು ನಾಯಿಗಳು ಯತ್ನಿಸಿದೆ. ಈ ವೇಳೆ ಯುವಕನ ಬೊಬ್ಬೆ ಕೂಗು ಹಾಗೂ ನಾಯಿಗಳ ಗದ್ದಲ ಕೇಳಿದ ಸ್ಥಳೀಯರು ಓಡಿ ಬಂದು ನಾಯಿಗಳನ್ನು ಓಡಿಸಿದ್ದಾರೆ.

ಯುವಕ ಧರಿಸಿದ್ದ ಶೂ ಗೆ ಬೀದಿ ನಾಯಿ ಕಚ್ಚಿದ್ದರಿಂದ ಗಂಭೀರ ಗಾಯಗಳಾಗಿಲ್ಲ ಆದರೆ, ಶೂ ಸಂಪೂರ್ಣ ಹರಿದುಹೋಗಿದೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಸ್ಥಳೀಯರು ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.




