ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಟ್ರಸ್ಟ್ (ರಿ. ) ಎಲ್ಪೇಲು – ಶ್ರೀ ಸತ್ಯನಾರಾಯಣ ದೇವರ ಕಟ್ಟೆಯ ಪುನರ್ ನಿರ್ಮಾಣ ಸಂಕಲ್ಪ ಹಾಗೂ ಸುವರ್ಣ ಮಹೋತ್ಸವ ಸಂಭ್ರಮದ ಸಮಿತಿ ರಚನೆ

ಬಂಟ್ವಾಳ : ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಟ್ರಸ್ಟ್ (ರಿ. ) ಎಲ್ಪೇಲು ಇದರ ವತಿಯಿಂದ ಬರುವ 2026, ಫೆಬ್ರವರಿ ತಿಂಗಳ 13, 14, 15 ದಿನಾಂಕದಂದು ನಡೆಯಲಿರುವ ಶ್ರೀ ಸತ್ಯನಾರಾಯಣ ದೇವರ ಉದ್ಯಾಪನ ಪೂಜೆ ಹಾಗೂ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀ ಸತ್ಯನಾರಾಯಣ ದೇವರ ಕಟ್ಟೆಯ ಪುನರ್ ನಿರ್ಮಾಣ ಸಂಕಲ್ಪ ಹಾಗೂ ಸುವರ್ಣ ಮಹೋತ್ಸವ ಸಂಭ್ರಮದ ಸಮಿತಿಯನ್ನು ರಚಿಸಲಾಯಿತು.

ಸಂಗಬೆಟ್ಟು ಶ್ರೀ ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಪ್ರಭಾಕರ ಐಗಲ್ ಇವರ ನೇತೃತ್ವದಲ್ಲಿ ಸತ್ಯನಾರಾಯಣ ಕಟ್ಟೆಯ ಪುನರ್ ನಿರ್ಮಾಣ ಸಂಕಲ್ಪ ನೆರವೇರಿತು.

ಗೌರವಾಧ್ಯಕ್ಷರಾಗಿ ನಿತ್ಯಾನಂದ ಪೂಜಾರಿ ಕೆಂತಲೆ, ಅಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್ ಪಿಲಿಮೊಗರುಗುತ್ತು, ಉಪಾಧ್ಯಕ್ಷರಾಗಿ ಸೀತಾರಾಮ ಶಾಂತಿ ಕಂಬಲದೋಡಿ, ನಾಗೇಶ್ ಸಪಲ್ಯ ಮಾದುಕುಮೇರು, ವೀರೇಂದ್ರ ಶೆಟ್ಟಿ ಕಂದಾವರ ಬಾಳಿಕೆ, ಪ್ರತಾಪ್ ಕುಮಾರ್ ಜೈನ್ ಕೆಂತಲೆ, ರವೀಂದ್ರ ಪ್ರಭು ಅನಂತಾಡಿ, ಕಾರ್ತಿಕ್ ಭಟ್ ಕುಕ್ಕಿಪಾಡಿ, ಕಾರ್ಯದರ್ಶಿಯಾಗಿ ಯೋಗೀಶ್ ಆಚಾರ್ಯ, ಜತೆ ಕಾರ್ಯದರ್ಶಿ ಪ್ರಭಾತ್ ನಾಯಕ್, ಕೋಶಾಧಿಕಾರಿ ಸಂಜೀವ ಗೌಡ, ಗೌರವ ಸಲಹೆಗಾರರಾಗಿ ಮಾಯಿಲ ಸಾಲಿಯಾನ್ ಕೇಪ್ಲಗುಡ್ಡೆ, ರಮಾನಂದ ನಾಯಕ್ ಎಲ್ಪೇಲು, ಶಿವಪ್ಪ ಪೂಜಾರಿ ಕೊಂಡಬೆಟ್ಟು, ಜಯರಾಮ್ ನಾಯಕ್, ಒಬಯ್ಯ ಗೌಡ ಕುಕ್ಕೇಡಿ, ವಿಶ್ವನಾಥ ಪಂಡಿತ್ ನೇಲ್ಯಕುಮೇರು, ಜಯರಾಮ್ ಆಚಾರ್ಯ ಸುವರ್ಣ ಮಹೋತ್ಸವ ಆಚರಣಾ ಸಮಿತಿಯಲ್ಲಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಕಾರ್ಯದರ್ಶಿ ರಾಜೇಂದ್ರ ಸಾಲಿಯಾನ್, ಕೋಶಾಧಿಕಾರಿ ಯೋಗೀಶ್ ಆಚಾರ್ಯ ಊರ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *