ಬಂಟ್ವಾಳ: ವಿದ್ಯುತ್ ದುರಸ್ತಿ ಮಾಡುವ ನೆಪದಲ್ಲಿ ಬಂದ ಕಳ್ಳ ಚಿನ್ನಾಭಾರಣ ಹಾಗೂ ನಗದು ಕಳವು ದೋಚಿದ ಘಟನೆ ಸಜೀಪನಡು ಗ್ರಾಮದ ದೇರಾಜೆಯಲ್ಲಿ ನಡೆದಿದೆ.
ಮದ್ಯಾಹ್ನ 2 ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೋರ್ವ ದೀಕ್ಷಿತ್ ಅವರ ಮನೆಗೆ ಬಂದು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ದುರಸ್ತಿ ಮಾಡಲು ಬಂದಿದ್ದಾನೆ ಎಂದು ಹೇಳಿದನು. ಮನೆಯಲ್ಲಿದ್ದ ಸರೋಜಿನಿ ಇದನ್ನು ಸತ್ಯವೆಂದು ನಂಬಿ ಆತನನ್ನು ಒಳಗೆ ಬಿಟ್ಟಿದ್ದರು.

ಆದರೆ ಆತ ದುರಸ್ತಿ ಮಾಡುವಂತೆ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್‌ನಲ್ಲಿದ್ದ ಸುಮಾರು 42,000 ಮೌಲ್ಯದ ಚಿನ್ನ ಹಾಗೂ 6,000 ನಗದನ್ನು ಕಳವು ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




