ಮಂಗಳೂರು : ಮಹಿಳೆಯೊಬ್ಬರು ಬೈಕ್ ವೊಂದರಲ್ಲಿ ತೆರಳುತ್ತಿದ್ದಾಗ ಸೀರೆಯು ಬೈಕ್ ಟಯರ್ ಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟ ಘಟನೆ ಸುರತ್ಕಲ್ ಬಳಿಯ ಕಾಣ ಎಂಬಲ್ಲಿ ನಡೆದಿದೆ.

ಮಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸೀರೆ ಬೈಕ್ ಟಯರ್ ಗೆ ಸಿಲುಕಿ, ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಬಸ್ ನ ಚಾಲಕ ಮೊಯ್ದಿ ಎಂಬವರು ತನ್ನ ಬಸ್ ನಿಲ್ಲಿಸಿ ರಸ್ತೆಗೆ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಮೊಯ್ದಿ ಅವರ ಮಾನವೀಯತೆ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.




