Breaking
23 Dec 2024, Mon

ಬೆಂಗಳೂರಲ್ಲಿ 34 ರೂ.ಗೆ ‘ಭಾರತ್ ಬ್ರಾಂಡ್’ ಅಕ್ಕಿ ಮಾರಾಟ ಆರಂಭ

ಬೆಂಗಳೂರು: ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದ್ದು, ಭಾರತ ಬ್ರಾಂಡ್ ನ ಅಕ್ಕಿಯನ್ನು ಕೆಜಿಗೆ 34 ರೂಪಾಯಿಯಂತೆ ಬೆಂಗಳೂರಿನಲ್ಲಿ ಮತ್ತೆ ಮಾರಾಟವಾಗ್ತಿದೆ.

ದೀಪಾವಳಿ ಹಬ್ಬದ ಅಂಗವಾಗಿ ಎರಡನೇ ಹಂತದ ಭಾರತ್ ಬ್ರಾಂಡ್ ಯೋಜನೆ ಇಂದಿನಿಂದ ಪ್ರಾರಂಭವಾಗಿದ್ದು, ಈಗ ಬೆಂಗಳೂರಿನಲ್ಲಿ ಈ ಯೋಜನೆಯ ಉತ್ಪನ್ನಗಳು ಲಭ್ಯ ಇವೆ.

ಎಂಆರ್‌ಪಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಡಿಮೆ ಬೆಲೆಯಲ್ಲಿ ಭಾರತ್ ಉತ್ಪನ್ನಗಳಾದ ಅಕ್ಕಿ, ಬೇಳೆ ಕಾಳುಗಳ ಪೂರೈಕೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಇದೀಗ ಬೆಂಗಳೂರಿನಲ್ಲಿ ಈ ಉತ್ಪನ್ನಗಳ ಮಾರಾಟ ಮತ್ತೆ ಶುರುವಾಗಿದೆ. ಈ ಮೂಲಕ ದೀಪಾವಳಿಗೆ ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.

ಭಾರತ್ ಉತ್ಪನ್ನಗಳ ಹಂತ 2ರಲ್ಲಿ ಬೆಂಗಳೂರಿನಲ್ಲಿ ಈ ಉತ್ಪನ್ನಗಳು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ಈ ಯೋಜನೆಯಡಿ ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ, 30 ರೂ.ಗೆ ಗೋಧಿ ಹಿಟ್ಟು, 70 ರೂ.ಗೆ ಕಡಲೆಬೇಳೆ, 107 ರೂ.ಗೆ ಹೆಸರುಬೇಳೆ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಅಕ್ಕಿ 55-60 ರೂ, ಗೋಧಿ 45-50 ರೂ, ಕಡಲೆಬೇಳೆ 90-100 ರೂ, ಹೆಸರುಬೇಳೆ 120-130 ರೂ.ಗೆ ಮಾರಾಟವಾಗುತ್ತಿದೆ.

Leave a Reply

Your email address will not be published. Required fields are marked *