Breaking
24 Mar 2026, Tue

ಅಕ್ರಮ ಬೈಲ ತಿದ್ದುಪಡಿ ಪ್ರಕರಣ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ 16 ನಿದೇ೯ಶಕರ ಅಮಾನತು

ಬಂಟ್ವಾಳ: ಅಕ್ರಮ ಬೈಲ ತಿದ್ದುಪಡಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ 16 ನಿದೇ೯ಶಕರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಅಧ್ಯಕ್ಷರು ಮತ್ತು ನಿರ್ದೇಶಕರಾದ ಸುರೇಶ್ ಕುಲಾಲ್‌, ಉಪಾಧ್ಯಕ್ಷರು ಮತ್ತು ನಿರ್ದೇಶಕರಾದ ಪದ್ಮನಾಭ ವಿಟ್ಲ , ನಿರ್ದೇಶಕರುಗಳಾದ ವಿಶ್ವನಾಥ ಕೆ.ಬಿ. ಜನಾರ್ಧನ ಬೊಂಡಾಲ , ವಿಜಯಕುಮಾರ್ ವಿ, ಅರುಣ್ ಕುಮಾ‌ರ್ ಕೆ , ರಮೇಶ್ ಸಾಲ್ಯಾನ್ ಬಿ , ಸತೀಶ , ಎನ್.ಸುರೇಶ್, ರಮೇಶ್ ಸಾಲ್ಯಾನ್ ,ನಾಗೇಶ್ ಬಿ, ಜಯಂತಿ ,ವಿದ್ಯಾ , ವಿಜಯಲಕ್ಷ್ಮೀ ,ಜಗನ್ನಿವಾಸಗೌಡ , ಎಂ.ಕೆ.ಗಣೇಶ್ ಸಮಗಾರ ಅಮಾನತುಗೊಂಡಿದ್ದಾರೆ.

ಈ ಬಗ್ಗೆ ಕನಾ೯ಟಕ ಸಹಕಾರ ಸಂಘಗಳ ಅಧಿನಿಯಮ 1959 ಪ್ರಕರಣ 29ಸಿ ಅಡಿ ಕ್ರಮ ಕೈಗೊಳ್ಳುವಂತೆ ಡಿ. ಲೋಕನಾಥ್ ಮತ್ತು ಐವರು ಸದಸ್ಯರು ಸಲ್ಲಿಸಿದ ದೂರಿನ ಅಜಿ೯ಯನ್ನು ವಿಚಾರಣೆ ನಡೆಸಿದ ಮೈಸೂರು ಸಹಕಾರ ಸಂಘಗಳ ಜಂಟಿ ನಿಬಂಧಕರು ಈ ಆದೇಶವನ್ನು ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *