Breaking
23 Mar 2026, Mon

ಕುವೆಟ್ಟು–ಪಿಲಿಚಾಮುಂಡಿಕಲ್ಲು ರಸ್ತೆ ಮರುಡಾಮರೀಕರಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಭರವಸೆ

ಬೆಳ್ತಂಗಡಿ: ಹಲವಾರು ವರ್ಷಗಳ ಬಹುಬೇಡಿಕೆಯ ಕುವೆಟ್ಟು ಗ್ರಾಮ ಶಕ್ತಿನಗರ – ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಕಾರ್ಯ ಕೈಗೊಳ್ಳುವಂತೆ ಕುವೆಟ್ಟು 114 ನೇ ಬೂತ್ ನ ನಾಗರಿಕರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ಮನವಿ ಸಲ್ಲಿಸಿದರು.

ನಾಗರಿಕರು ಮನವಿಗೆ ಸ್ಪಂದಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಬೇಡಿಕೆ ಈಡೇರಿಸುವುದಾಗಿ ಭರವಸೆಯಿತ್ತರು.

ಈ ಸಂದರ್ಭದಲ್ಲಿ ಕುವೆಟ್ಟು ಪಂಚಾಯತ್ ಸದಸ್ಯರು, ಕುವೆಟ್ಟು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟ ಪಾಡ್ಯರ್ ನೇತೃತ್ವದಲ್ಲಿ ಮಂಡಲ ಒಬಿಸಿ ಮೋರ್ಚಾಪ್ರಧಾನ ಕಾರ್ಯದರ್ಶಿ ವಿಠಲ ಆಚಾರ್ಯ, ಶಕ್ತಿ ಕೇಂದ್ರ ಪ್ರಮುಖರಾದ ಚಂದ್ರಹಾಸ ದಾಸ್, ಪಂಚಾಯತ್ ಸದಸ್ಯರಾದ ನಿತಿನ್ ಕುಮಾರ್, ಬೂತ್ ಅಧ್ಯಕ್ಷರಾದ ದಯಾನಂದ ಆಚಾರ್ಯ, ಕಾರ್ಯದರ್ಶಿ ಸುಮಿತ್ರ ಆಚಾರ್ಯ ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *