Breaking
10 May 2026, Sun

ಮೂರು ದಶಕಗಳ ಹಳೇ ಸಂಚಾರ ಉಲ್ಲಂಘನೆಯ ದಂಡಕ್ಕೆ 50% ರಿಯಾಯಿತಿ

ಮಂಗಳೂರು: ಮೂರು ದಶಕಗಳ ಹಳೇ ಸಂಚಾರ ಉಲ್ಲಂಘನೆಯ ಪ್ರಕರಣ ಸಂಬಂಧ ದಂಡ ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳು, ಪೊಲೀಸ್ ಇಲಾಖೆಯ ಅಧಿಕೃತ ವೆಬೈಟ್ (ಕೆಎಸ್ ಪಿ) ಹಾಗೂ ಬೆಂಗಳೂರು ಒನ್ ಸೇರಿ ಆನ್ ಲೈನ್ ಮೂಲಕ ಕೂಡ ದಂಡ ಪಾವತಿಗೆ ಅವಕಾಶ ನೀಡಲಾಗಿದೆ.

ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ರ ಅವಧಿಯಲ್ಲಿ ದಾಖಲಾಗಿ, ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ವಾಹನ ಮಾಲಿಕರುಗಳಿಗೆ ನ. 21 ರಿಂದ ಡಿ. 12 ರವರೆಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *