Breaking
25 Sep 2026, Fri

ಭಟ್ಕಳದ ರೆಸಾರ್ಟ್‌ನಲ್ಲಿ 5 ವರ್ಷದ ಬಾಲಕ ಈಜುಕೊಳಕ್ಕೆ ಬಿದ್ದು ಸಾವು

ಭಟ್ಕಳ : ಜಾಲಿ ಸಮೀಪದ ರೆಸಾರ್ಟ್‌ನಲ್ಲಿ 5 ವರ್ಷದ ಬಾಲಕ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ನ.20 ಸಂಜೆ ನಡೆದಿದೆ.

ಮೃತಪಟ್ಟ ಬಾಲಕನನ್ನು ಮದ್ರಸಾ ಶಿಕ್ಷಕ ಮೌಲವಿ ಶಾಹಿದುಲ್ಲಾ ಅವರ ಪುತ್ರ ಮೊಹಮ್ಮದ್ ಮುಸ್ತಕೀಂ ಶೇಖ್ ಎಂದು ಗುರುತಿಸಲಾಗಿದೆ.

ತಾಯಿ ಮತ್ತು ತಮ್ಮನೊಂದಿಗಿದ್ದು ರೆಸಾರ್ಟ್ನಲ್ಲಿದ್ದ ಬಾಲಕ ಕೆಲ ಹೊತ್ತು ತಾಯಿಯು ಸ್ಥಳದಲ್ಲಿಲ್ಲದ ವೇಳೆ ಸುಮಾರು ಐದು ಅಡಿ ಆಳದ ಈಜುಕೊಳಕ್ಕೆ ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ.

ತಕ್ಷಣವೇ ತಾಯಿ ಮತ್ತು ಕೆಲ ಯುವಕರು ಬಂದು ಸಿಪಿಆರ್ ಮೂಲಕ ಬಾಲಕನನ್ನು ನೀರಿನಿಂದ ಹೊರತೆಗೆದರು . ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ಈ ಕುರಿತು ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *