Breaking
26 Sep 2026, Sat

ಜನಿವಾರ ಮತ್ತು ಕೈದಾರ ವಿಚಾರಿಸಿ ಕಿರುಕುಳ: ಮಿಯಾರು ಮೊರಾರ್ಜಿ ಶಾಲೆಯ ಶಿಕ್ಷಕ ವಜಾ

ಕಾರ್ಕಳ: ತಾಲೂಕಿನ ಮಿಯಾರು ಗ್ರಾಮದ ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಸ್ಕಿ ಹೊಡೆಸುವುದು, ಜೊತೆಗೆ ಜನಿವಾರ ಮತ್ತು ಕೈಗೆ ಕಟ್ಟುವ ದಾರಗಳ ಬಗ್ಗೆ ಪ್ರಶ್ನಿಸಿ ಕಿರುಕುಳ ನೀಡುತ್ತಿದ್ದ ಶಿಕ್ಷಕನನ್ನು ವಜಾ ಮಾಡಿರುವ ಘಟನೆ ನಡೆದಿದೆ.

ಕರ್ತವ್ಯದಿಂದ ವಜಾಗೊಂಡ ಶಿಕ್ಷಕನನ್ನು ಕಲಬುರ್ಗಿ ಮೂಲದ ಮದರಸ್ ಮಕಾಂದಾರ್ ಎಂದು ಗುರುತಿಸಲಾಗಿದೆ.

ಈ ವಿಚಾರದಲ್ಲಿ ಪ್ರಾಂಶುಪಾಲರು ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ಆತನ ವರ್ತನೆ ಮುಂದುವರಿಸಿದ್ದರಿಂದ, ಕೊನೆಗೆ ಕರ್ತವ್ಯದಿಂದ ವಜಾಗೊಳಿಸುವಂತೆ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ.

ಘಟನೆಯ ಬಳಿಕ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಶಿಕ್ಷಕನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದರು.

Leave a Reply

Your email address will not be published. Required fields are marked *