ಕಣ್ಣೂರಿನ ಪ್ರೈಓವರ್ ಮತ್ತು ಅಂಡರ್‌ಪಾಸ್‌ ನಡುವೆ ಸಿಲುಕಿದ ಕಾರು

ಕಣ್ಣೂರು: ಚಾಲಾ ಬೈಪಾಸ್ ಬಳಿ ಪ್ರೈಓವರ್ ಮತ್ತು ಅಂಡರ್‌ಪಾಸ್‌ ನಡುವೆ ಕಾರೊಂದು ಸಿಲುಕಿಕೊಂಡಿರುವ ಘಟನೆ ನಡೆದಿದೆ.

ನಿರ್ಮಾಣ ಹಂತದಲ್ಲಿದ್ದ ಪ್ರೈಓವರ್‌ ಮೇಲೆ ಕಾರು ಚಲಾಯಿಸಿದ ಚಾಲಕನು ಕುಡಿದ ಮತ್ತಿನಲ್ಲಿ ಈ ಎಡವಟ್ಟು ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪರಿಣಾಮವಾಗಿ, ಪ್ರೈಓವರ್ ಮತ್ತು ಅಂಡರ್‌ಪಾಸ್ ಮಧ್ಯದಲ್ಲಿದ್ದ ಜಾಗದಲ್ಲಿ ಕಾರು ತಲೆಕೆಳಗಾಗಿ ಸಿಲುಕಿಕೊಂಡಿದೆ.

ಸ್ಥಳೀಯರು ನೇತಾಡುತ್ತಿದ್ದ ಕಾರಿನಿಂದ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಬಳಿಕ ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಗಿದೆ.

Leave a Reply

Your email address will not be published. Required fields are marked *