ಬಂಟ್ವಾಳ : ತಾಲೂಕಿನ ಸಿದ್ದಕಟ್ಟೆ ಸಮೀಪ ಸಿದ್ದಕಟ್ಟೆ -ಕೊಡಂಗೆ ಎಂಬ ನೂತನ ಕಂಬಳ ಕರೆಯನ್ನು ನಿರ್ಮಾಣ ಮಾಡುವ ಮೂಲಕ ಯಶಸ್ವಿಯಾಗಿ ಮೊದಲ ವರ್ಷದ ಕಂಬಳ ಕೂಟವನ್ನು ಪೂರೈಸಿ ಪ್ರಥಮ ಬಾರಿಗೆ ಮರಿಕೋಣಗಳ ಐತಿಹಾಸಿಕ ರೋಟರಿ ಕಂಬಳ ಕೂಟ ನಡೆಸಲು ಅನುವು ಮಾಡಿಕೊಟ್ಟು ಕರಾವಳಿ ಜೆಲ್ಲೆಯ ಜಾನಪದ ಕ್ರೀಡೆಯಾದ ಕಂಬಳದ ಕಲ್ಪನೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಹಬ್ಬಿಸಲು ಸಂಪೂರ್ಣ ಸಹಕಾರ ನೀಡಿದ ಸಿದ್ದಕಟ್ಟೆ -ಕೊಡಂಗೆ ಕಂಬಳ ಸಮಿತಿಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಳ್ಳಾಪು ಇವರನ್ನು ರೋಟರಿ ಕ್ಲಬ್ ಲೋರಟ್ಟೋ ಹಿಲ್ಸ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ ಶೀತಲ, ಸ್ಥಾಪಕ ಅಧ್ಯಕ್ಷ ಅವಿಲ್ ಮಿನೇಜಸ್, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಭಟ್, ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಕೋಶಾಧಿಕಾರಿ ಹೆರಾಲ್ಡ್ ಮೊಂತೆರೋ ಮಾಜಿ ಅಧ್ಯಕ್ಷರಾದ ಪದ್ಮರಾಜ್ ಬಲ್ಲಾಳ್ ಮಾವಂತೂರು, ಶ್ರತಿ ಮಾಡ್ತಾ, ಎಂಟನಿ ಸಿಕ್ತ್ವೆರಾ ಮತ್ತಿತರ ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.