Breaking
12 Aug 2026, Wed

ಅಕ್ರಮ ಗೋ ವಧೆಗೆ ಸಹಕರಿಸಿದ ಆರೋಪ ಎದುರಿಸುತ್ತಿರುವ ಝೊಹರಾ ಮನೆಗೆ ಮುಸ್ಲಿಂ ಮುಖಂಡರ ನಿಯೋಗ ಭೇಟಿ

ಕೊಕ್ಕಡ: ಅಕ್ರಮ ಗೋ ವಧೆಗೆ ಸಹಕರಿಸಿದ ಆರೋಪ ಎದುರಿಸುತ್ತಿರುವ ಕೊಕ್ಕಡದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಝೊಹರಾ ಅವರ ಮನೆಗೆ ತಾಲೂಕಿನ ಮುಸ್ಲಿಂ ಮುಖಂಡರ ನಿಯೋಗ ನ.15 ರಂದು ಭೇಟಿ ನೀಡಿದೆ.

ಈ ವೇಳೆ ಘಟನೆಯ ಬಗ್ಗೆ ವಿವರ ಪಡೆದ ನಿಯೋಗವು ಈ ಬಗ್ಗೆ ನಾವು ಪೊಲೀಸ್ ಮೇಲಧಿಕಾರಿಗಳ ಜೊತೆ ಮಾತುಕತೆ ಮಾಡಿ ಇಂತಹಾ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವ ಬಗ್ಗೆ ನಿಯೋಗ ಭೇಟಿ ನೀಡುವ ಬಗ್ಗೆ ಆದ ನಿರ್ಣಯಗಳನ್ನು ತಿಳಿಸಲಾಯಿತು. ಮಾತ್ರವಲ್ಲ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಾಯಿತು.

ಬಳಿಕ ಪುತ್ತೂರು ಸಹಾಯಕ ಆಯುಕ್ತರ ಆದೇಶದಂತೆ ಮನೆ ಜಪ್ತಿ ತೆರವಿಗೆ ಬಂದ ಪೊಲೀಸ್ ಅಧಿಕಾರಿಗಳ ಜೊತೆಯೂ ಮಾತುಕತೆ ನಡೆಸಲಾಯಿತು.

ಈ ಸಂದರ್ಭ ನಿಯೋಗದಲ್ಲಿ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಪ್ರಮುಖರಾದ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಸಲೀಂ ಸುನ್ನತ್‌ಕೆರೆ, ಕೆರೀಂ ಗೇರುಕಟ್ಟೆ, ಕೆ.ಎಸ್ ಅಬ್ದುಲ್ಲ ಕರಾಯ, ಲೆತೀಫ್ ಹಾಜಿ ಗುರುವಾಯನಕೆರೆ, ಮುಸ್ತಫ ಗುರುವಾಯನಕೆರೆ, ನಿಸಾರ್ ಕುದ್ರಡ್ಕ, ರಮೀಝ್ ಬೆಳ್ತಂಗಡಿ, ಉಮರ್ ಜಿ.ಕೆ, ಶಮೀಮ್ ಯೂಸುಫ್ ಮದ್ದಡ್ಕ, ಆಶ್ರಫ್ ಆಲಿಕುಂಞಿ ಮುಂಡಾಜೆ, ಹನೀಫ್ ಪುಂಜಾಲಕಟ್ಟೆ, ಅಬ್ದುಲ್ ರಹಿಮಾನ್ ಪಡ್ಪು, ಸಾಲಿಹ್ ಮದ್ದಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *