Breaking
23 Mar 2026, Mon

ದೆಹಲಿಯ ಇಸ್ಲಾಮಿಕ್ ಭಯೋತ್ಪಾದನೆಯ ಕೃತ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

ಉಡುಪಿ: ದೆಹಲಿಯ ಇಸ್ಲಾಮಿಕ್ ಭಯೋತ್ಪಾದನೆಯ ಕೃತ್ಯವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಉಡುಪಿ ನಗರದ ಜಡ್ಕ ಸ್ಟ್ಯಾಂಡ್ ಬಳಿ ಪ್ರತಿಭಟನೆ ನಡೆಯಿತು.

ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡ ಸುನಿಲ್ ಕೆ.ಆರ್ ಇವತ್ತು ದೆಹಲಿ ಸ್ಪೋಟದಲ್ಲಿ ವೈದ್ಯರ ಪಾತ್ರ ಇರುವುದು ಸಾಬೀತಾಗಿದೆ. ಎಲ್ಲೆಡೆ ಉಗ್ರ ಕೃತ್ಯ ನಡೆಸಿ ಇಸ್ಲಾಮಿಕ್ ದೇಶ ಮಾಡುವ ಮತ್ತು ಕಾಫಿರರನ್ನು ಕೊಲ್ಲುವ ಹುನ್ನಾರ ಇದರ ಹಿಂದೆ ಇದೆ.

ಇದನ್ನು ಬೇರು ಸಮೇತ ನಿರ್ನಾಮ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರು.

ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಭಾಗಿಯಾದರು.

Leave a Reply

Your email address will not be published. Required fields are marked *