Breaking
22 Mar 2026, Sun

ತಾಳೆ ಮರದಿಂದ ಕೆಳಗೆ ಬಿದ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

ಬ್ರಹ್ಮಾವರ: ತಾಳೆ ಮರ ಹತ್ತಿ ತಾಳೆ ಬೊಂಡ ಕೊಯ್ಯುವ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿರುವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನ. 13 ರಂಧು ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಹಾರಾಡಿ ಗ್ರಾಮದ ಹೊನ್ನಾಳ ಕುಕ್ಕುಡೆಯ ಕೀರ್ತಿನಗರ ನಿವಾಸಿ ಉಮೇಶ (48) ಎಂದು ಗುರುತಿಸಲಾಗಿದೆ.

ತಾಳೆ ಹಣ್ಣು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಉಮೇಶ್‌ ಅವರು ನ.7 ರಂದು ತಾಳೆ ಮರ ಹತ್ತಿ ತಾಳೆ ಬೊಂಡ ಕೊಯ್ಯುವಾಗ ಆಯತಪ್ಪಿ ಸುಮಾರು 20 ಅಡಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕುತ್ತಿಗೆ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *