Breaking
25 Mar 2026, Wed

ಕಾಸರಗೋಡಿನಲ್ಲಿ ಬಾವಿಯೊಳಗೆ ಬಿದ್ದ ವೃದ್ಧ ಸಹಿತ ಯುವಕನ ರಕ್ಷಣೆ

ಕಾಸರಗೋಡು : ಬಾವಿಗೆ ಬಿದ್ದ ವೃದ್ಧರೋರ್ವರನ್ನು ಕಾಪಾಡಲು ಹೋದ ಯುವಕನೂ ಮೇಲೆ ಬರಲಾಗದೆ ಬಾವಿಯಲ್ಲೇ ಉಳಿದಿದ್ದು ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಗಳು ಇಬ್ಬರನ್ನೂ ಮೇಲಕ್ಕೆತ್ತಿದ ಘಟನೆ ಕಾಸರಗೋಡಿನ ತಳಂಗರೆ ಪಳ್ಳಿಕಾಲ್ ಎಂಬಲ್ಲಿ ನಡೆದಿದೆ.

ನ. 11ರಂದು ಅಬ್ದುಲ್ ರಹಿಮಾನ್ ಎಂಬವರ ಬಾವಿಗೆ ನೆಲ್ಲಿಕುನ್ನು ನಿವಾಸಿಯಾದ ಟಿ.ಎಂ.ಮುನೀರ್ (74) ಎಂಬವರು ಆಕಸ್ಮಿಕವಾಗಿ ಬಿದ್ದಿದ್ದು ಅವರನ್ನು ಮೇಲಕ್ಕೆತ್ತಲು ಉತ್ತರ ಪ್ರದೇಶ ನಿವಾಸಿಯಾದ ಲುಕ್ ಮಾನ್ ಎಂಬ ಯುವಕ ಬಾವಿಗೆ ಇಳಿದಿದ್ದ. ಆದರೆ ಆ ಬಳಿಕ ಆತ 15 ಅಡಿ ಆಳದ ಬಾವಿಯಿ೦ದ ಮೇಲೆ ಬರಲಾಗದೆ ಚಡಪಡಿಸಿದ್ದು, ನಂತರ ಅಗ್ನಿಶಾಮಕ ದಳದವರು ಬಂದು ಬಾವಿಯೊಳಗಿದ್ದ ವೃದ್ಧ ಸಹಿತ ಯುವಕನನ್ನು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *