ಬೆಳ್ತಂಗಡಿ : ರೋಟರಿ ಕ್ಲಬ್ ಲೋರೆಟ್ಟೊ ಹಿಲ್ಸ್ ,ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ ಹೊಕ್ಕಾಡಿಗೋಳಿ,ಇವರುಗಳ ಜಂಟಿ ಆಶ್ರಯದಲ್ಲಿ,ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯಲ್ಲಿ ಇಂದು ರೋಟರಿ ಜಿಲ್ಲೆ 3181 ನ ಮಾಜಿ ಸಹಾಯಕ ಗವರ್ನರ್ / ಹೊಕ್ಕಾಡಿಗೋಳಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾದ ರಾಘವೇಂದ್ರ ಭಟ್ ರವರ ವತಿಂದ ಅಂದಾಜು 45,000 ಮೊತ್ತದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿಯ ವಿದ್ಯಾರ್ಥಿಗಳಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ನಡೆಯಿತು.

ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ವಿಜೇತರಾದ ಕ್ರೀಡಾಪಟು ಗಳನ್ನು ಅಭಿನಂದಿಸಲಾಯಿತು,
ಹಾಗೂ ವಲಯ ಮಟ್ಟದ ಪ್ರತಿಭಾ ಕಾರಂಜಿಲ್ಲಿ ಸ್ಪರ್ಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೂ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ , ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯ ಬಗ್ಗೆ ಮಕ್ಕಳಿಗೂ ಹಾಗೂ ಪೋಷಕರಿಗೂ ಮಾಹಿತಿಯನ್ನು ನೀಡಿ ವಿಮೆಯನ್ನು ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ದಿನೇಶ್ ಹುಲಿಮೇರು ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ ಶುಭವನ್ನ ಹಾರೈಸಿದರು.
ರೋಟರಿ ಜಿಲ್ಲೆ 3181 ನ ವಲಯ ಸೇನಾನಿಯಾದ ಗಣೇಶ ಶೆಟ್ಟಿ , ರೋಟರಿ ಕ್ಲಬ್ಬಿನ ಉಪಾಧ್ಯಕ್ಷರಾದ ವಿಜಯ ಫೆರ್ನಾಂಡಿಸ್ , ಪದಾಧಿಕಾರಿಗಳಾದ, ಹರಿಪ್ರಸಾದ್ ಶೆಟ್ಟಿ ಪ್ರಭಾಕರ ಪ್ರಭು, ಕಿರಣ್ ಮಂಜಿಲ , ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ, ಪದ್ಮನಾಭ ಕೋಟ್ಯಾನ್ ಶಶಿಧರ ಕಲ್ಲಾಪು, ಸುರೇಶ್ ಹೊಕ್ಕಾಡಿ, ಸುರೇಶ್ H ಹೊಕ್ಕಾಡಿಗೋಲಿ , ಶಿವರಾಜ್, ಪಂಚಾಯತ್ ಸದಸ್ಯರಾದ ಪ್ರಭಾಕರ್ H, ಶಾಲಾ ಶಿಕ್ಷಕರಾದ , ಮೆಟೆಲ್ಡಾ ಡಿಸೋಜ ಶುಭವತಿ ಅಕ್ಷತಾ ಸುತೀಕ್ಷಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಮಿತ್ರ S.ಸ್ವಾಗತಿಸಿ ಸಿಲ್ವಿಯಾ ಕಾರ್ಯಕ್ರಮವನ್ನು ನಿರೂಪಿಸಿ ಸುಚಿತ್ರ ಧನ್ಯವಾದ ವಿತ್ತರು.



