Breaking
24 Jun 2026, Wed

ಸುಳ್ಯದಲ್ಲಿ 15 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

ಸುಳ್ಯ: ಬಾವಿಗೆ ಬಿದ್ದಿದ್ದ ಪುಟ್ಟ ಕರುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಸುಳ್ಯದ ಸೋಣಂಗೇರಿಯ ಬಸ್ಸು ತಂಗುದಾಣದ ಬಳಿ ನ.07 ರಂದು ನಡೆದಿದೆ.

ಸೋಣಂಗೇರಿಯ ಯೋಗಿಶ್ ಎಂಬವರ ಕರು ಬಸ್ಸು ತಂಗುದಾಣದ ಬಳಿ ಇರುವ 15 ಅಡಿ ಆಳದ ಬಾವಿಗೆ ಬಿದ್ದಿತ್ತು. ಬಳಿಕ ಕರುವನ್ನು ಅಗ್ನಿಶಾಮಕ ದಳ ಮತ್ತು ಊರವರು ಸೇರಿ ಸುರಕ್ಷಿತವಾಗಿ ಮೇಲಕೆತ್ತಿ ರಕ್ಷಣೆ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕಿರಣ್ ಕುಮಾರ್. ಎಸ್, ಸಿಬ್ಬಂದಿಯವರಾದ ಮಹಮ್ಮದ್ ರಫೀಕ್, ಚಂದ್ರಶೇಖರ ನಾಯಕ, ಸಂಜೀವ ಗೌಡ, ಹರ್ಷವರ್ಧನ, ಮೋಹನ್ ಬಾಬು, ಹೊನ್ನಪ್ಪ ಭಾಗವಹಿಸಿದ್ದರು

Leave a Reply

Your email address will not be published. Required fields are marked *