Breaking
23 Mar 2026, Mon

ಬಿ ಸಿ ರೋಡಿನಲ್ಲಿ ಗಾಂಜಾ ವಶ: ಉತ್ತರ ಪ್ರದೇಶದ ಯುವಕನ ಬಂಧನ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಿಷೇಧಿತ ಅಮಲು ಪದಾರ್ಥಗಳನ್ನು ಹೊಂದಿದ್ದ ವ್ಯಕ್ತಿಯೋರ್ವನನ್ನು ಬಂಟ್ವಾಳ ಅಬಕಾರಿ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಸಂತೋಷ್ ಸೋಂಕರ್ (28) ಎಂದು ಗುರತಿಸಲಾಗಿದೆ.

ಮಾಹಿತಿಯ ಪ್ರಕಾರ ಆರೋಪಿ ಬಿ.ಸಿ. ರೋಡಿನ ರೈಲ್ವೆ ಹಳಿಯಲ್ಲಿ ಗಿರಾಕಿಗಳಿಗೆ ನೀಡುವ ಉದ್ದೇಶದಿಂದ ಅಲೆದಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಬಕಾರಿ ಪೋಲೀಸರು ದಾಳಿ ನಡೆಸಿ ಆರೋಪಿಯಿಂದ 58650 ರೂ ಮೌಲ್ಯದ ಸೊತ್ತು, 1173 ಪ್ಲಾಸ್ಟಿಕ್ ಸ್ಯಾಚೆಟ್ ಗಳಲ್ಲಿ ಗಾಂಜಾ ಪದಾರ್ಥವನ್ನು ಹೊಂದಿದ್ದು , ಒಟ್ಟು 6 ಕೆಜಿ 590 ಗ್ರಾಂ ಗಾಂಜಾ ಉಂಡೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *