ಬಂಟ್ವಾಳ: ಅಣ್ಣಳಿಕೆ ಯಕ್ಷಾಭಿಮಾನಿಗಳು ಮತ್ತು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ನ. 9 ಭಾನುವಾರದಂದು ಮಧ್ಯಾಹ್ನ 2 ಗಂಟೆಗೆ ಅಣ್ಣಳಿಕೆ ವಿಘ್ನೇಶ್ವರ ಸಭಾಂಗಣದಲ್ಲಿ 17ನೇ ವರ್ಷದ ‘ಶ್ರೀ ರಾಮಾನುಗ್ರಹ’ (ಕನ್ಯಾತರಂಗ) ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿದೆ.

ನಮ್ಮನ್ನಗಲಿದ ಹಿರಿಯ ಕಲಾವಿದರಾದ ಸಿದ್ದಕಟ್ಟೆ ಪದ್ಮನಾಭ ಶೆಟ್ಟಿಗಾರ್, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಮತ್ತು ಶಂಭು ಶರ್ಮ ವಿಟ್ಲ ಇವರ ಸಂಸ್ಮರಣಾರ್ಥ ನಡೆಯುವ ಈ ತಾಳಮದ್ದಳೆಯಲ್ಲಿ ಜಿಲ್ಲೆಯ ಆಯ್ದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸಂಘಟಕ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




