ಬಂಟ್ವಾಳ: ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ತರಕಾರಿಯನ್ನು ಕೊಡುವ ಮೆಲ್ಕಾರಿನ ತರಕಾರಿ ವ್ಯಾಪಾರಿ ಮಹಮ್ಮದ್ ಶರೀಫ್ ಅವರು ರಾಜ್ಯಮಟ್ಟದ ಕರ್ನಾಟಕ ರತ್ನ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನ.09 ರಂದು ಬೆಳಗ್ಗೆ 11 ಗಂಟೆಗೆ ವಸಂತ ಲಕ್ಷ್ಮಿ ಫೌಂಡೇಶನ್ ಸಂಜಯನಗರ ಬೆಂಗಳೂರು ಇವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸದಾಶಿವನಗರದ ವೀರಶೈವ ಸಭಾಭವನದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಮ್ಮದ್ ಶರೀಫ್ ಸೇರಿದಂತೆ 20 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ನಾಡಿನ ಹೆಸರಾಂತ ಸಾಹಿತಿ ನಾಡೋಜ ಡಾ. ಕುಂಬಾರ್ ವೀರಭದ್ರಪ್ಪನವರು, ಮಾಜಿ ಸಚಿವ ವರ್ತೂರ್ ಪ್ರಕಾಶ್, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಚಿತ್ರನಟ ವಿ ಮನೋಹರ್ ಮತ್ತು ಚಿತ್ರನಟಿ ರೇಖಾದಾಸ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ವಸಂತ ಲಕ್ಷ್ಮಿ ಫೌಂಡೇಶನ್ ಕಾರ್ಯದರ್ಶಿ ಕೆ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




