Breaking
23 Mar 2026, Mon

ಬಂಟ್ವಾಳ ಎಸ್ ವಿ ಎಸ್ ದೇವಳ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ವಲಯದ ವತಿಯಿಂದ ಎಸ್ ವಿ ಎಸ್ ದೇವಳ ಪ್ರೌಢ ಶಾಲೆ ಬಂಟ್ವಾಳ ಇಲ್ಲಿ ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನ. 06ರಂದು ಜರಗಿತು.

ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ಕಾರ್ಯಕ್ರಮ ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಮ್ ಪೂಜಾರಿಯವರು ಸಂಪನ್ಮೂಲ ವ್ಯಕ್ತಿಯಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ದಲ್ಲಿ ಇಂದಿನ ಯುವಪೀಳಿಗೆಯ ಪಾತ್ರ , ವಿಚಾರದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ವಸಂತ ಮೂಲ್ಯ, ಮನಿಹಲ್ಲ ಒಕ್ಕೂಟದ ಅಧ್ಯಕ್ಷರಾದ ಪದ್ಮನಾಭ ಗೌಡ, ಸಹ ಶಿಕ್ಷಕ ದಾಮೋದರ್ ಪಡಿಯರ್,ವಲಯ ಮೇಲ್ವಿಚಾರಕ ರಾಜೇಶ್ ನಾಯ್ಕ್, ಸೇವಾಪ್ರತಿನಿಧಿ ಉಷಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *