Breaking
23 Mar 2026, Mon

ಲಾಯಿಲದ ಬಜಕ್ಕಿರೆ ಸಾಲು ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ

ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಬಜಕ್ಕಿರೆಸಾಲು ಎಂಬಲ್ಲಿ ನ.5 ರಂದು ಚಿರತೆ ಕಂಡು ಬಂದಿದೆ

ಯೋಗೀಶ್ ಭಿಡೆ ಎಂಬವರು ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಉಜಿರೆ ಕಡೆ ಕಾರಿನಲ್ಲಿ ಹೋಗುವ ಸಮಯ ಭಾರಿ ಗಾತ್ರದ ಚಿರತೆ ರಸ್ತೆ ಮಧ್ಯೆ ಕಂಡು ಬಂದಿದೆ ಹೇಳಿದ್ದಾರೆ. ಸ್ವಲ್ಪ ಹೊತ್ತು ರಸ್ತೆಯಲ್ಲೇ ಇದ್ದ ಚಿರತೆ ಬಳಿಕ ಅರಣ್ಯದ ಕಡೆ ಹೋಗಿದೆ.

ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *