ಕುಂದಾಪುರ: ತಾಲೂಕಿನ ತಲ್ಲೂರೀನಲ್ಲಿ ಕಾರಿನ ಕಿಟಕಿಯ ಗಾಜು ಒಡೆದು ಲಕ್ಷಾಂತರ ರೂ. ನಗದು ಹಣ ದೋಚಿ ಪರಾರಿಯಾದ ಘಟನೆ ನ.4 ರಂದು ಸಂಜೆ ನಡೆದಿದೆ.

ಕೆಂಚನೂರು ನಿವಾಸಿ ಗುತ್ತಿಗೆದಾರರಾಗಿರುವ ಗುಂಡು ಶೆಟ್ಟಿ ಅವರು ತಲ್ಲೂರಿನ ಬ್ಯಾಂಕಿನಲ್ಲಿ 2ಲಕ್ಷ ರೂ. ಹಣವನ್ನು ಪಡೆದು, ಕಾರಿನೊಳಗೆ ಇಟ್ಟು ಬಳಿಕ ಅವರು ತಲ್ಲೂರು ಪೇಟೆ ಸಮೀಪದ ವಸತಿ ಸಂಕೀರ್ಣದ ಎದುರು ಕಾರನ್ನು ನಿಲ್ಲಿಸಿ ಬಾಡಿಗೆ ಮನೆಗೆ ತೆರಳಿದ್ದರು. ಸುಮಾರು 10-15 ನಿಮಿಷ ಕಳೆದು ನಂತರ ವಾಪಸ್ ಬಂದು ನೋಡಿದಾಗ ಕಾರಿನ ಕಿಟಕಿ ಒಡೆದು ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.





