ಬೆಳ್ತಂಗಡಿ : ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಕತ್ತಿ ಹಾಗೂ ಚಾಕು ಹಿಡಿದು ಓಡಾಡುತ್ತಿದ್ದ ಘಟನೆ ನ. 4 ರಂದು ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಶಾಲೆಯ ಬಳಿ ನಡೆದಿದೆ.

ಕುತ್ಲೂರು ಪೇಟೆ ಸಮೀಪ ಈ ವ್ಯಕ್ತಿ ಸಂಚರಿಸುತ್ತಿರುವುದು ಗಮನಿಸಿದ ಸ್ಥಳೀಯರು ಆತನನ್ನು ಪ್ರಶ್ನಿಸಿದಾಗ, ಆತ ತುಳುವಿನಲ್ಲಿ ಮಾತನಾಡಿ ತಾನು ರಬ್ಬರ್ ಟ್ಯಾಪಿಂಗ್‌ಗೆ ಬಂದಿರುವುದಾಗಿ ಹೇಳಿದ್ದಾನೆ. ಬಳಿಕ ಆತನ ಸೊಂಟದಲ್ಲಿ ಕತ್ತಿ ಇರಿಸಿಕೊಂಡಿರುವುದು ಗಮನಿಸಿದವರು ವಿಚಾರಿಸಿದಾಗ, ಆತ ಅಲ್ಲಿಂದ ಪರಾರಿಯಾದನೆಂದು ತಿಳಿದುಬಂದಿದೆ.




