ಬೆಳ್ತಂಗಡಿ : ಕೊಡುಗೈದಾನಿ, ಸಮಾಜ ಸೇವಕ, ಉದ್ಯಮಿ ನವಶಕ್ತಿ ಶಶಿಧರ ಶೆಟ್ಟಿ ಬರೋಡ ಇವರು ವ್ಯಕ್ತಿಯೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಹೌದು ಬೆಳ್ತಂಗಡಿ ತಾಲೂಕಿನ ಸಾಯಿರಾಮ್ ಫ್ರೆಂಡ್ಸ್ ತಂಡದ ಸದಸ್ಯರಾದ ಸುಕೇಶ್ ರವರು ಕಾರಣಾಂತರಗಳಿಂದ ಕೆಲಸ ಕಳೆದುಕೊಂಡು ಬೇಸತ್ತಿದ್ದರು. ಈ ಸಮಯದಲ್ಲಿ ಸ್ವ-ಉದ್ಯೋಗ ಮಾಡಲು ಶಶಿಧರ ಶೆಟ್ಟಿಯವರು ನೆರವು ನೀಡಿ ಶುಭ ಹಾರೈಸಿದ್ದಾರೆ.

ಈ ಸಂದರ್ಭ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಉಪಸ್ಥಿತರಿದ್ದರು.



