Breaking
27 Jul 2025, Sun

ವಿಜಯಪುರ ರೈತರ ಭೂಮಿ ವಕ್ಫ್​​​ಗೆ?ಸಿದ್ದರಾಮಯ್ಯನವರೇ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ: ತೇಜಸ್ವಿ ಸೂರ್ಯ ಕಿಡಿ

ಬೆಂಗಳೂರು: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು ಅಂತ ವಿಜಯಪುರ ಜಿಲ್ಲೆಯ ಅಧಿಕಾರಿಗಳು ರೈತರ ಜಮೀನನ್ನು ವಕ್ಫ್ ಬೋರ್ಡ್​​ಗೆ ಸೇರಿಸಲು ಹೊರಟಿದ್ದಾರೆ. ಆದರೆ ಒಂದೇ ಒಂದು ದಾಖಲೆಗಳಲ್ಲಿ ಜಮೀನು ಯಾವ ರೀತಿ ವಕ್ಫ್ ಬೋರ್ಡ್​ಗೆ ಸೇರುತ್ತದೆ ಎಂಬುವುದಕ್ಕೆ ಮಾಹಿತಿ ಇಲ್ಲ. ಸಚಿವ ಜಮೀರ್ ಅಹಮದ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ? ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ಮಾಡಿದರು.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ನೋಂದಣಿ ಕುರಿತಾಗಿ ಎದ್ದಿರುವ ಗೊಂದಲಗಳ ಕುರಿತಾಗಿ ಅಲ್ಲಿನ ರೈತರು ಮತ್ತು ನೋಟಿಸ್ ಪಡೆದಿರುವ ಸಾರ್ವಜನಿಕರು ನಿಯೋಗದೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು. ಬಳಿಕ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬಹಳಷ್ಟು ಜನರಿಗೆ ಕೇಂದ್ರ ಸರ್ಕಾರ ಯಾಕೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಅಂತ ಗೊತ್ತಿಲ್ಲ. ಸಚಿವ ಜಮೀರ್ ಅಹಮದ್ ಕೆಲವು ದಿನಗಳ ಹಿಂದೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ವಕ್ಫ್ ಬೋರ್ಡ್ ಯಾವ ಆಸ್ತಿಗಳು ತನ್ನದು ಅಂತ ಹೇಳುತ್ತದೆ ಅದನ್ನು 15 ದಿನಗಳಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಬಂದಿದ್ದಾರೆ. ಸಚಿವರು ಹೇಳಿದರು ಅಂತ ಜಿಲ್ಲಾಧಿಕಾರಿಗಳಯ ರಾತ್ರೋ ರಾತ್ರಿ ಪಹಣಿಯಲ್ಲಿ ಹೆಸರು ಬದಲಿಸಲು ಹೊರಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆಯನ್ನು ವಕ್ಫ್ ಬೋರ್ಡ್ ತನ್ನದು ಅಂತ ಹೇಳುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *