ಹೊಕ್ಕಾಡಿಗೋಳಿ: ಪೂಂಜ ಪಂಚದುರ್ಗಾ ಪರಮೇಶ್ವರಿ ಅಮ್ಮನವರ ಮತ್ತು ಮೂಜಿಲ್ನಾಯ ಕೊಡಮಣಿತ್ತಾಯ ದೈವಗಳ ನಂಟು ಹೊಂದಿರುವ ಇತಿಹಾಸ ಪ್ರಸಿದ್ಧ ಮಹಿಷಮರ್ಧಿನಿ ಕಂಬಳ ಸಮಿತಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಹೊಕ್ಕಾಡಿಗೋಳಿ ಡಿಸೆಂಬರ್ 7 ಶನಿವಾರದಂದು ನಡೆಯಲಿದ್ದು ಅ ಬಗ್ಗೆ ಸಭೆಯು ಇಂದು ಕಂಬಳ ವಠಾರದಲ್ಲಿ ಕಂಬಳ ಸಮಿತಿ ಅಧ್ಯಕ್ಷರಾದ ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಯವರ ಉಪಸ್ಥಿತಿಯಲ್ಲಿ ಜರಗಿತು.
ಕಂಬಳ ಕರೆಯ ಸುತ್ತಮುತ್ತಲಿನ ಕೆಲಸ ಕಾರ್ಯಗಳನ್ನು ನಾಳೆಯಿಂದ ಪ್ರಾರಂಭಿಸಿ ಅತೀ ಶೀಘ್ರದಲ್ಲಿ ಕುದಿ ಕಂಬಳ ಪ್ರಾರಂಭಗೊಲಿಸಬೇಕೆಂದು ನಿರ್ಧರಿಸಲಾಯಿತು .ವಿವಿಧ ತಂಡದ ಸದಸ್ಯರು ಶ್ರಮದಾನದ ಮೂಲಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.
ಕಳೆದ ವರ್ಷ ಕಂಬಳಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.ಸಮಿತಿಯ ಹಿರಿಯ ಸಂಘಟಕರು, ಸ್ಥಳ ದಾನಿಗಳು,ಕಂಬಳ ಸಮಿತಿಯ ಎಲ್ಲಾ ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿ ಮತ್ತು ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.
ಇತಿಹಾಸ ಸೃಷ್ಟಿಸಿದ ಈ ಭಾರಿಯ ಹೊಕ್ಕಾಡಿಗೋಳಿ ಕಂಬಳ ಸಾಂಸ್ಕೃತಿಕ ನಗರಿ ಹೊಕ್ಕಾಡಿಗೋಳಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಬಿಸಲಿದೆ ಎಂದು ಸಮಿತಿಯು ತಿಳಿಸಿತು.