Breaking
25 Sep 2026, Fri

ಮಡಿಕೇರಿಯಲ್ಲಿ ಶಿಕ್ಷಕರು ಸೇರಿದಂತೆ ಮಕ್ಕಳ ಮೇಲೆ ಹೆಜ್ಜೇನು ದಾಳಿ: ಗಂಭೀರ ಗಾಯ

ಮಡಿಕೇರಿ: ಹೆಜ್ಜೇನು ಕಡಿತಕ್ಕೊಳಗಾಗಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊ೦ಡಿರುವ ಘಟನೆ ವಿರಾಜಪೇಟೆ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದಿದೆ.

ವಿದ್ಯಾರ್ಥಿಗಳು ಎ೦ದಿನ೦ತೆ ಶಾಲೆಗೆ ಬಂದು ಬೆಳಗ್ಗಿನ ಪ್ರಾಥ೯ನೆ ಮುಗಿಸಿ, ಬಿಸಿಹಾಲು ಪಡೆಯಲು ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಸಮೀಪದ ತೋಟದಿಂದ ಹಾರಿಬಂದ ಹೆಜ್ಜೇನು ಹಿಂಡು ದಾಳಿ ನಡೆಸಿವೆ.

ಮಕ್ಕಳು, ಶಾಲಾ ಶಿಕ್ಷಕರ ಮೇಲೆ ದಾಳಿಯಾಗಿದ್ದು, ಮಕ್ಕಳು ಚೀರಾಡುತ್ತಿದ್ದ ಶಬ್ಧ ಕೇಳಿಸುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಜೇನು ಓಡಿಸಿ ಮಕ್ಕಳನ್ನ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿ ಹೆಜ್ಜೇನು ದಾಳಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮಕ್ಕಳಿಗೆ ಯಾವುದೇ ತೊ೦ದರೆಗಳಿಲ್ಲ ಎ೦ದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಳಿಕ ನಗರ ಠಾಣೆಯ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *