Breaking
25 Sep 2026, Fri

ಸುಳ್ಯದಲ್ಲಿ ಖಾಸಗಿ ಮಿನಿ ಬಸ್ ಪಲ್ಟಿ: ಹಲವರಿಗೆ ಗಂಭೀರ ಗಾಯ

ಸುಳ್ಯ: ಖಾಸಗಿ ಮಿನಿ ಬಸ್ ಪಲ್ಟಿಯಾಗಿ ಹಲವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಮಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾರಿವಾರಕಾಣ ಬಳಿ ನ.3 ರಂದು ನಡೆದಿದೆ.

ಕೆಲವು ಮೂಲಗಳ ಮಾಹಿತಿಯ ಪ್ರಕಾರ ಬಸ್ ತುಮಕೂರಿಗೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಪಾರಿವಾರಕಾಣದ ಗಾರ್ಡ್ ಶೆಡ್ ಬಳಿ ರಸ್ತೆಯಿಂದ ಹೊರ ಬಿದ್ದು ಅಂಚಿನ ಕೊಳದಲ್ಲಿ ಉರುಳಿ ಬಿದ್ದಿದೆ ಅಂತ ಹೇಳಲಾಗುತ್ತಿದೆ.

ಈ ವೇಳೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಗೊಂಡವರನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣ ಏನು..? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *