Breaking
25 Sep 2026, Fri

ಪಯ್ಯಂಬಳಂ ಬೀಚ್ ನಲ್ಲಿ ಕರ್ನಾಟಕ ಮೂಲದ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಸಮುದ್ರದ ಪಾಲು

ಕೇರಳ: ಸ್ನಾನ ಮಾಡಲು ಹೋದ ಕರ್ನಾಟಕ ಮೂಲದ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಕೇರಳ ಕಣ್ಣೂರುನ ಪಯ್ಯಂಬಳಂ ಬೀಚ್ ನಲ್ಲಿ ನಡೆದಿದೆ.

ಮೃತರನ್ನು ಬೆಂಗಳೂರಿನ ಫಾರ್ಮಸಿ ವಿಭಾಗದ ವಿದ್ಯಾರ್ಥಿಗಳಾದ ಮೊಹಮ್ಮದ್ ಅಫ್ಘಾನ್, ಅಫ್ಘಾನ್ ಅಹ್ಮದ್ ಮತ್ತು ರೆಹಾಸುದ್ದೀನ್ ಎಂದು ಗುರುತಿಸಲಾಗಿದೆ.

11 ಮಂದಿಯಿದ್ದ ವಿದ್ಯಾರ್ಥಿಗಳ ತಂಡ ಭಾನುವಾರ ಕಣ್ಣೂರುನ ಪಯ್ಯಂಬಳಂ ಸಮೀಪದ ಬೀಚ್ ನಲ್ಲಿರುವ ರೆಸಾರ್ಟ್ ಗೆ ಬಂದಿತ್ತು. 8 ಮಂದಿ ಸಮುದ್ರದಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಅಫ್ರಾಝ್ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಆತನ ರಕ್ಷಣೆಗೆ ಧಾವಿಸಿದ್ದ ಇಬ್ಬರು ಸೇರಿ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರೂ ನೀರುಪಾಲಾಗಿದ್ದಾರೆ.

ಮೀನುಗಾರರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಹಕಾರದಿಂದ ಮೂವರ ಮೃತದೇಹ ಹೊರತೆಗೆದಿದ್ದಾರೆ.

Leave a Reply

Your email address will not be published. Required fields are marked *