Breaking
25 Sep 2026, Fri

ಇಲಿ ಪಾಷಾಣ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು

ಕಾಸರಗೋಡು: ಇಲಿ ಪಾಷಾಣ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬರು ಮೃತಪಟ್ಟ ಮಂಗಳೂರಿನಲ್ಲಿ ನಡೆದಿದೆ

ಮೃತರನ್ನು ಕಾಸರಗೋಡುವಿನ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ನಿವಾಸಿ ಕಿರಣ್(36) ಎಂದು ಗುರುತಿಸಲಾಗಿದೆ.

ಕಿರಣ್ ಅವರು ಅ. 26 ರಂದು ಸಂಜೆ ಪಂಜಿಲ್ಲು ತೂಗುಸೇತುವೆ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಕಿರಣ್ ಮೂರ್ಚಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಊರವರು ಇವರನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ತಲುಪಿಸಿದರು. ಸುಳ್ಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಇಲಿ ಪಾಷಾಣ ಹೊಟ್ಟೆಯೊಳಗೆ ಸೇರಿರುವುದು ತಿಳಿದು ಬಂದಿದೆ.

ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದ್ರೆ ಭಾನುವಾರ ಮುಂಜಾನೆ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಇವರು ತಂದೆ ವಣ್ಣಪ್ಪ ಗೌಡ, ತಾಯಿ ಕುಸುಮಾವತಿ, ಪತ್ನಿ ಪುನಿತ, ಮಕ್ಕಳಾದ ಅಭಿರಾಂ, ದಿಯಾರಾಂ, ತೀರ್ಥ ಎಂಬವರನ್ನು ಅಗಲಿದ್ದಾರೆ.

ಆದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *