Breaking
22 Mar 2026, Sun

ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ 20 ವರ್ಷ ಸಜೆ, 16 ಸಾವಿರ ರೂ. ದಂಡ

ಕಾಸರಗೋಡು: ಬಾಲಕಿಯೋವ೯ಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಆರೋಪಿಗೆ 20 ವರ್ಷ ಸಜೆ, 16 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮುಳಿಯಾರು ಪೈಕ ರಸ್ತೆಯ ಕೆ.ನಿತ್ಯಾನಂದ(29) ನಡುವೆಗೆ ಹೊಸದುರ್ಗ ಪೋಕ್ಸೋ ನ್ಯಾಯಾಲಯ ಈ ಶಿಕ್ಷೆ ವಿಧಿಸಿದ್ದು, ದಂಡ ಪಾವತಿಸದಿದ್ದರೆ 8 ತಿಂಗಳು ಅಧಿಕ ಸಜೆ ಅನುಭವಿಸಬೇಕು ಎಂದು ಆದೇಶ ಹೊರಡಿಸಿದೆ.

2023 ಜು. 21ರಂದು ಈ ಘಟನೆ ನಡೆದಿದ್ದು,ಆರೋಪಿ ಕೆ.ನಿತ್ಯಾನಂದ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ 14 ವರ್ಷದ ಬಾಲಕಿಯನ್ನು ಜನವಾಸವಿಲ್ಲದ ಕಟ್ಟಡಕ್ಕೆ ಕೊಂಡೊಯ್ದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *