ಕಾರ್ಕಳ: ತಾಲೂಕಿನ ಮುರತಂಗಡಿಯ ಶ್ರೀ ಬಾಲಾಂಜನೇಯ ಯುವಕ ಸಂಘದ ಆಟದ ಮೈದಾನದ ಎದುರು ರಿಕ್ಷಾ ಚಾಲಕನು ರಸ್ತೆ ವಿಭಜಕದ ಕಬ್ಬಿಣದ ಗ್ರಿಲಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅ. 31 ರಂದು ನಡೆದಿದೆ.
ಗಾಯಗೊಂಡಿರುವವರನ್ನು ಆನೆಕೆರೆ ರಿಕ್ಷಾ ಗ್ಯಾರೇಜ್ ನ ಮಾಲಕರಾದ ಚಿತ್ರಾಕ್ಷ ಎಂದು ಗುರುತಿಸಲಾಗಿದೆ.

ಮೂಡಬಿದರೆಯಿಂದ ಬರುತ್ತಿದ್ದ ರಿಕ್ಷಾ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಚಿತ್ರಾಕ್ಷ ಅವರನ್ನು ತಕ್ಷಣವೇ ಸಾಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.




