Breaking
21 Mar 2026, Sat

ಮಂಗಳೂರು: ಕದ್ರಿ ಪಾರ್ಕ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ ಗೆ ಶುಲ್ಕ ?

ಮಂಗಳೂರು: ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಶುಲ್ಕ ವಿಧಿಸಲು ಮಹಾನಗರ ಪಾಲಿಕೆ ಚಿಂತನೆ ಮಾಡಿದೆ.

ಈ ರಸ್ತೆಯನ್ನು ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದೀಗ ಈ ರಸ್ತೆಗೆ ಟೋಲ್ ಅಳವಡಿಸುವ ಮೂಲಕ ಈ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಶುಲ್ಕ ವಿಧಿಸುವ ಬಗ್ಗೆ ಚಚೆ೯ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಾಹನ ಎಂಟ್ರಿಯಾಗಿ 5 ನಿಮಿಷದೊಳಗೆ ಹೊರಗೆ ಹೋದರೆ ಯಾವುದೇ ಶುಲ್ಕವಿರುವುದಿಲ್ಲ. ಅದಕ್ಕಿಂತ ಹೆಚ್ಚಾದರೆ ಆ ವಾಹನಗಳ ಮಾಲೀಕರ ಖಾತೆಯಿಂದ ಕನಿಷ್ಠ 50 ರೂ. ಶುಲ್ಕ ಕಡಿತವಾಗಲಿದೆ. ಜನವರಿ ತಿಂಗಳಿನಿಂದ ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *