Breaking
11 May 2026, Mon

ಶಿತಾ೯ಡಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮೂಡುಬಿದಿರೆ: ಮಹಿಳೆಯೋವ೯ರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಶಿತಾ೯ಡಿ ಗ್ರಾ. ಪಂ. ವ್ಯಾಪ್ತಿಯ ದಡ್ಡಾಲಪಲ್ಕೆಯಲ್ಲಿ ಎಂಬಲ್ಲಿ ಅ.30 ರಂದು ನಡೆದಿದೆ.

ಶಿರ್ತಾಡಿ ದಡ್ಡಾಲಪಲ್ಕೆಯ ನಿವಾಸಿ ಫ್ಲೋರಿನ್ ಡಿಸೋಜ ( 58) ಆತ್ಮಹತ್ಯೆ ಮಾಡಿಕೊಂಡವರು.

ಫ್ಲೋರಿನ್ ಅವರ ಮೂವರು ಮಕ್ಕಳು ವಿದೇಶದಲ್ಲಿದ್ದು ಮನೆಯಲ್ಲಿ ತಂಗಿಯೊಂದಿಗೆ ವಾಸವಾಗಿದ್ದರು. ಕಳೆದ ಕೆಲ ಸಮಯಗಳಿಂದ ಇವರಿಗೆ ಖಾಯಿಲೆಯೊಂದು ಬಾಧಿಸಿದ್ದು ಇದರಿಂದಾಗಿ ಮಾನಸಿಕವಾಗಿ ಜಿಗುಪ್ಸೆಗೊಂಡಿದ್ದರು. ತಂಗಿ ಶಿರ್ತಾಡಿ ಪೇಟೆಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *