Breaking
19 Sep 2026, Sat

ಅಡಿಕೆ ಅಂಗಡಿಯಿಂದ 5 ಲಕ್ಷ ರೂ. ಕಳ್ಳತನ ಪ್ರಕರಣ : ಪ್ರಮುಖ ಸುಳಿವು ಪತ್ತೆ

ಪುತ್ತೂರು: ಗಾಂಧಿ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅರಣ್ಯ ಉತ್ಪನ್ನ ಮತ್ತು ಅಡಿಕೆ ವ್ಯಾಪಾರ ಮಾಡುವ ಉದ್ಯಮಿ ವಸಂತ್ ಗೌಡ ಅವರ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರಿಗೆ ನಿರ್ಣಾಯಕ ಸುಳಿವು ಸಿಕ್ಕಿದ್ದು, ತನಿಖೆ ತೀವ್ರ ಪ್ರಗತಿಯಲ್ಲಿದೆ.

ಪೊಲೀಸ್ ಅಧಿಕಾರಿಗಳು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಮುಖ ಸುಳಿವು ಸಿಕ್ಕಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವ ಅನುಮಾನಾಸ್ಪದ ಹಳೆಯ ಮೋಟಾರ್ ಸೈಕಲ್ ಈಗ ತನಿಖೆಯ ಕೇಂದ್ರಬಿಂದುವಾಗಿದೆ.

ಈ ಪ್ರಕರಣದಲ್ಲಿ ಕಂಡುಬರುವ ಬೈಕ್ ಕಳೆದ ತಿಂಗಳು ಬೆಳ್ತಂಗಡಿ ಬಳಿ ವರದಿಯಾದ ಕಳ್ಳತನದಲ್ಲಿ ಭಾಗಿಯಾಗಿದ್ದ ಬೈಕ್ ಅನ್ನು ಹೋಲುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಎರಡೂ ಘಟನೆಗಳ ಹಿಂದೆ ಒಂದೇ ಗುಂಪಿನ ಕೈವಾಡವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *