ಕಾಸರಗೋಡು: ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದಲ್ಲಿ ಮನೆಯೊಂದರ ಕಾಂಕ್ರೀಟ್ ಕೆಲಸ ಮಾಡುತ್ತಿದ್ದಾಗ ಮೇಸ್ತ್ರಿಯೊಬ್ಬರು ಕಲ್ಲು ಬಿದ್ದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯ ವೆಚ್ಚಕ್ಕಾಗಿ ಈಗ ಪರದಾಟ ನಡೆಸುವ ಸ್ಥಿತಿ ಎದುರಾಗಿದೆ.

ವರ್ಕಾಡಿ ಚರ್ಚ್ ನ ನಡಿಬೈಲ್ ವಾರ್ಡ್ ನ ನಿವಾಸಿ, ವೃತ್ತಿಯಲ್ಲಿ ಮೇಸ್ತ್ರಿ ಆಗಿರುವ ಉರ್ಬನ್ ಡಿಸೋಜ ಎಂಬವರಿಗೆ ಚಪ್ಪಡಿ ಕಲ್ಲು ಬಿದ್ದು ಸೊಂಟ ಬೆನ್ನೆಲುಬು ಹಾಗೂ ಕುತ್ತಿಗೆ ಗೇ ಗಂಭೀರ ಗಾಯವಾಗಿದ್ದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆಯ ಅಗತ್ಯತೆ ಇದೆ ಎಂದು ಹೇಳಿದ್ದು 3 ಲಕ್ಷ ರೂಪಾಯಿಗಳ ತಗಲುತ್ತದೆ ಎಂದು ಕುಟುಂಬಸ್ಥರಲ್ಲಿ ತಿಳಿಸಿದ್ದಾರೆ. ಇವರು ತುಂಬ ಬಡವರಾಗಿದ್ದು, ಮಕ್ಕಳಿಬ್ಬರು ಓದುತ್ತಿದ್ದು ಚಿಕಿತ್ಸೆಯ ವೆಚ್ಚ ಭರಿಸಲು ಅಸಹಾಯಕರಾಗಿದ್ದಾರೆ.

ಈ ನಿಟ್ಟಿನಲ್ಲಿ ಸಹೃದಯಿ ದಾನಿಗಳ ಸಹಾಯ ನಿರೀಕ್ಷೆಯಲಿದ್ದಾರೆ ಉರ್ಬನ್ ಡಿಸೋಜ ಮತ್ತವರ ಪತ್ನಿ ವೀಣಾ ಡಿಸೋಜಾ.
ಇವರಿಗೆ ಸಹಾಯ ಮಾಡಲು ಇಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣವನ್ನು ಹಾಕಬಹುದು ಅಥವಾ ನೇರವಾಗಿ ಸಂಪರ್ಕ ಮಾಡಬಹುದು.
ಬ್ಯಾಂಕ್ ವಿವರಗಳು:
ಖಾತೆಯ ಹೆಸರು: VEENA D’SOUZA
ಖಾತೆ ಸಂಖ್ಯೆ: 02392180007945
ಖಾತೆ ಪ್ರಕಾರ: SBA
IFSC ಕೋಡ್: CNRB0010239
ಶಾಖೆ: FRMCI, ಮಂಗಳೂರು
UPI ಐಡಿ: 8088352521@cnrb
ಸಂಪರ್ಕ: 8088352521



