ಸುಬ್ರಹ್ಮಣ್ಯ: ಫೇಸ್ಸುಕ್ ಖಾತೆಯಲ್ಲಿ ದ್ವೇಷ ಭಾವನೆ ಉಂಟು ಮಾಡುವ ಸಂದೇಶ ಹರಡಿದ ಆರೋಪ ಮೇಲೆ ಸುನಿಲ್ ಪಣಪಿಲ ವಿರುದ್ದ ದೂರು ದಾಖಲಾಗಿದೆ.
ಕಡಬ ತಾಲೂಕಿನ ಪದ್ಮಡ್ಕ ಮನೆಯ ರತಿನ್ ಎಂಬವರು ಸುನಿಲ್ ಪಣಪಿಲ ಅವರ ವಿರುದ್ಧ ದೂರು ನೀಡಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಮಾನಹಾನಿಕಾರಕವಾಗಿ ಮಾತನಾಡಿದ್ದರೆ ಎಂದು ಆರೋಪಿಸಿ ಪ್ರಶ್ನಿಸಿ ದೂರು ನೀಡಿದ್ದ ಈಶ್ವರಿ ಪದ್ಮುಂಜ ಅವರ ಬಗ್ಗೆ ಟೀಕೆ ಮಾಡಿದ ಸುನಿಲ್ ಪಣಪಿಲ ಅವರು ಪ್ರಭಾಕರ ಭಟ್ ಪರ ಮಾತನಾಡಿದ್ದು ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ದೂರು ನೀಡಿದ ಮಹಿಳೆ, ಒಮ್ಮೆ ಮತ್ತೊಂದು ಧರ್ಮದ ಧರ್ಮ ಗ್ರಂಥಗಳನ್ನು ಓದಲಿ, ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರ ಎಂದು ಉಲ್ಲೇಖಿಸಿದ್ದ ವಾಕ್ಯಗಳ ಬಗ್ಗೆ ಈ ಮಹಿಳೆ ಯಾರಿಗೆ ದೂರು ನೀಡುತ್ತಾರೆ.

ಎಲ್ಲಿ, ನಾರಿಯರನ್ನು ಪೂಜಿಸುತ್ತಾರೋ, ಅಲ್ಲಿ ದೇವತೆಗಳು ನೆಲೆಸುತ್ತಾರೆಂದು ಸಾರಿದ ಧರ್ಮ ನಮ್ಮದು. ನಮ್ಮ ಧರ್ಮಕ್ಕೂ ಅವರ ಧರ್ಮಕ್ಕೂ ವ್ಯತ್ಯಾಸ ತಾಳೆ ಹಾಕಿ ನೋಡದೆ ಈ ಮಹಿಳೆಗೆ ಕಾಂಗ್ರೆಸ್ ಸರಕಾರ ಒಂದು ನಿಗಮ ಮಂಡಳಿ ಕೊಡಬಹುದು. ಡಾ. ಜಿ ಅವರನ್ನು ಮುಟ್ಟಲು ಅವರಪ್ಪ ಬಂದರೂ ಬಿಡಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ಕೋಮುಪ್ರಚೋದನೆ ಮಾಡುವ ಹಾಗೂ ಎರಡು ಧರ್ಮಗಳ ನಡುವೆ ದ್ವೇಷ ಭಾವನೆ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುಬ್ರಹ್ಮಣ್ಯ ಠಾಣೆಗೆ ದೂರಿನಲ್ಲಿ ಆರೋಪಿಸಿದ್ದಾರೆ.




