Breaking
11 Aug 2026, Tue

ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿ ಮೀನು ಸಾಗಾಟದ ಪಿಕ್ ಅಪ್ ಪಲ್ಟಿ, ಮೂವರಿಗೆ ಗಾಯ

ಮಂಗಳೂರು: ಮೀನು ಸಾಗಾಟದ ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಮಗುಚಿಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಮಂಗಳೂರಿನ ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿ ಅ. 28 ರಂದು ನಡೆದಿದೆ.

ರತೀಶ್ (38), ಶೈಲಜಾ (57) ಹಾಗೂ ಶಾರದಾ (60) ಗಾಯಗೊಂಡವರಾಗಿದ್ದು ಮೂವರನ್ನೂ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ.

ಬೆಳಗ್ಗೆ ಸುಮಾರು 6 ಗಂಟೆಯ ಸುಮಾರಿಗೆ ಮಂಗಳೂರಿನಿಂದ ಕೇರಳದ ತಲಪಾಡಿ ಕಡೆಗೆ ತೆರಳುತ್ತಿದ್ದ ಪಿಕ್ ಅಪ್ ವಾಹನವು ಚಾಲಕನ ನಿರ್ಲಕ್ಷ್ಯದಿಂದ ಸ್ಕಿಡ್ ಆಗಿ ಮಗುಚಿಬಿದ್ದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *