Breaking
10 May 2026, Sun

ಹೆಬ್ರಿಯಲ್ಲಿ ಹಂದಿಗೆ ಇರಿಸಿದ್ದ ಉರುಳಿಗೆ ಬಿದ್ದ ಚಿರತೆ

ಉಡುಪಿ: ಹಂದಿಗೆ ಇರಿಸಲಾಗಿದ್ದ ಉರುಳಿಗೆ ಚಿರತೆಯೊಂದು ಬಿದ್ದಿದ್ದು ಕಾರ್ಯಾಚರಣೆಯ ಮೂಲಕ ಅರಣ್ಯ ಇಲಾಖೆ ರಕ್ಷಣೆ ಮಾಡಿದ ಘಟನೆ ಉಡುಪಿಯ ಹೆಬ್ರಿ ಸಮೀಪದ ಮುದ್ರಾಡಿಯ ಎಂಬಲ್ಲಿ ನಡೆದಿದೆ.

ಉರುಳು ಸುತ್ತಿದ ಗೂಟದೊಂದಿಗೆ ಒದ್ದಾಡುತ್ತಿರುವ ಚಿರತೆಯನ್ನು ಸ್ಥಳೀಯರು ಗಮನಿಸಿದ್ದು ಗಾಯಗೊಂಡ ಚಿರತೆ ವ್ಯಾಘ್ರ ವಾದ್ದರಿಂದ ಯಾರೂ ಸಮೀಪಕ್ಕೆ ಹೋಗಿಲ್ಲ. ಬಳಿಕ ಈ ಕುರಿತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಅರವಳಿಕೆ ಕೊಟ್ಟು, ಚಿರತೆಯನ್ನು ರಕ್ಷಿಸಿದ್ದಾರೆ. ಪಶು ವೈದ್ಯರಾದ ಡಾಕ್ಟರ್ ಮೇಘನಾ, ಡಾಕ್ಟರ್ ಯಶಸ್ವಿನಿ ಮತ್ತು ಉಚ್ಚು ಟ್ರಸ್ಟ್ ನ ಅಕ್ಷಯ್ ಶೇಟ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *